ರಾಜ್ಯೋತ್ಸವ ಪ್ರಶಸ್ತಿ ಪಡೆದ ನಮ್ಮ "ಕನ್ನಡ ನಾಡಿನ ಪತ್ರಕರ್ತರ ಇಂಗ್ಲೀಷ್ ವ್ಯಾಮೋಹ"
ಈ ವರ್ಷದ ನಮ್ಮ ಕರ್ನಾಟಕ ರಾಜ್ಯದ "ರಾಜ್ಯೋತ್ಸವ ಪ್ರಶಸ್ತಿ " ಪ್ರಕಟಿಸಲಾಗಿದೆ. ಅದರಲ್ಲಿ ಕನ್ನಡಪ್ರಭದ "ಪ್ರತಾಪಸಿಂಹ"ರ ಹೆಸರು ಪ್ರಸ್ತಾಪವಾಗಿದೆ. ಯುವ ಪತ್ರಕರ್ತರಿಗೆ ಪ್ರಶಸ್ತಿ ದೊರೆತಿದೆ. ಸಂತೋಷದ ವಿಷಯವೇ.
ಆದರೆ ಪ್ರಶಸ್ತಿ ಬಂದ ಬಗ್ಗೆ ಫೇಸ್ ಬುಕ್ ನಲ್ಲಿ "ಸಮೃದ್ಧ ಇಂಗ್ಲೀಷಿನಲ್ಲಿ" ಬರೆದುಕೊಳ್ಳುತ್ತಾರೆ
Shubhashayagalu sir...
"RAAJYOTSAVADA SHUBHAASHAYAGALU"
ಈ ವರ್ಷದ ನಮ್ಮ ಕರ್ನಾಟಕ ರಾಜ್ಯದ "ರಾಜ್ಯೋತ್ಸವ ಪ್ರಶಸ್ತಿ " ಪ್ರಕಟಿಸಲಾಗಿದೆ. ಅದರಲ್ಲಿ ಕನ್ನಡಪ್ರಭದ "ಪ್ರತಾಪಸಿಂಹ"ರ ಹೆಸರು ಪ್ರಸ್ತಾಪವಾಗಿದೆ. ಯುವ ಪತ್ರಕರ್ತರಿಗೆ ಪ್ರಶಸ್ತಿ ದೊರೆತಿದೆ. ಸಂತೋಷದ ವಿಷಯವೇ.
ಆದರೆ ಪ್ರಶಸ್ತಿ ಬಂದ ಬಗ್ಗೆ ಫೇಸ್ ಬುಕ್ ನಲ್ಲಿ "ಸಮೃದ್ಧ ಇಂಗ್ಲೀಷಿನಲ್ಲಿ" ಬರೆದುಕೊಳ್ಳುತ್ತಾರೆ
ಪ್ರಸಸ್ತಿ ಬಂದಿರೋ ಖುಷಿಯಲ್ಲಿ ಶುಭಾಶಯಗಳನ್ನು ಫೇಸ್ ಬುಕ್ ಗೆಳೆಯರಿಗೆ ವಿನಂತಿಸಿಕೊಳ್ಳುತ್ತಾರೆ. ನಮ್ಮ ಕನ್ನಡ ಪ್ರಭದ ಸುವರ್ಣ 24*7 ನ ಸಂಪಾದಕರಾದ ಶ್ರೀಯು ತ ವಿಶ್ವೇಶ್ವರಭಟ್ರು ಸಹ "
ನಮ್ಮ ಪ್ರತಾಪ ಸಿಂಹರ ಸಾಧನೆಗೆ ರಾಜ್ಯ ಸರ್ಕಾರ "ರಾಜ್ಯೋತ್ಸವ ಪ್ರಶಸ್ತಿ" ಘೋಷಿಸಿದೆ. ರಾಜ್ಯೋತ್ಸವ ಪ್ರಶಸ್ತಿ ಕೊಟ್ಟಿದ್ದನ್ನೂ ಸಹ " ಇಂಗ್ಲೀಷಿನಲ್ಲಿಯೇ ಬರೆದುಕೊಳ್ಳುತ್ತಾರೆ" ಏನನ್ನಬೇಕು.ವಿಶ್ವೇಶ್ವರ ಭಟ್ಟರು ಪ್ರತಾಪ ಸಿಂಹರು ಇಬ್ಬರು "ರಾಜ್ಯೋತ್ಸವ ಪ್ರಶಸ್ತಿ" ಸಂಭ್ರಮವನ್ನು ಹಂಚಿಕೊಂಡಿದ್ದೂ "ಸಮೃದ್ಧ ಇಂಗ್ಲೀಷಿನಲ್ಲಿಯೇ" ಇದು ನಮ್ಮ ಕರ್ನಾಟಕ ರಾಜ್ಯದ ಹಣೆ ಬರಹವೋ, ದುರಾದೃಷ್ಟವೋ ತಾಯಿ ಭುವನೇಶ್ವರಿನೇ ಹೇಳಬೇಕು.
ಪ್ರತಿ ವರ್ಷ ಮಾದ್ಯಮಗಳ ಪತ್ರಕರ್ತರನ್ನು ಹಿಡಿದು ತಂದು ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಡುತ್ತಿದ್ದಾರೆ. ಯಾರೂ ಯಾವ ಸಾಧನೆಗಳನ್ನು ಮಾಡಿದ್ದಾರೆಯೋ ಇಲ್ಲವೋ ಅದು ಯಾರಿಗೂ ಗೊತ್ತಾಗಲ್ಲ. ಕೊಡುವವರು ಪ್ರಶಸ್ತಿಯನ್ನು ಕೊಡುತ್ತಾರೆ. ಕೆಲವರು ಪಡೆದುಕೊಳ್ಳುತ್ತಾರೆ. ಇಲ್ಲಿ ಯಾರೂ ಈ ರಾಜ್ಯಕ್ಕೆ ಏನೂ ಮಾಡಿದ್ದಾರೋ ಅದು ಪ್ರಶಸ್ತಿ ಪಡೆದವರಿಗೇ ಗೊತ್ತು (ಒಳಗೊಳಗೆ ನಗ್ತಾರೆ) ರವಿಬೆಳಗೆರೆ ಯವರಿಗೂ ರಾಜ್ಯೋತ್ಸವ ಪ್ರಶಸ್ತಿ ಕೊಟ್ಟಿದ್ದಾರೆ. ಇನ್ನು ಪ್ರತಾಪಸಿಂಹರಿಗೆ ಕೊಡದಿದ್ದರೆ ಹೇಗೆ ಹೇಳಿ? ತಗೊಳ್ಳಿ ಬಿಡಿ. ಮುಂದಿನ ವರ್ಷ ಮತ್ತಷ್ಟು ಜನರಿಗೆ ಸಿಗುತ್ತೆ ಸರತಿ ಸಾಲಿನಲ್ಲಿ ಇರಬೇಕು ಅಷ್ಟೆ. ಒಂದೇ ಒಂದು ಸಾರಿ ಗ್ರಾಮ ಪಂಚಾಯಿತಿ , ತಾಲ್ಲೂಕು, ಜಿಲ್ಲಾ, ಪುರಸಭೆ, ಅಧ್ಯಕ್ಷರಾದರೆ ಸಾಯೋವವರೆಗೂ ಮಾಜಿ ಅಧ್ಯಕ್ಷರಾಗಿರುತ್ತಾರೆ ಶಾಸಕರು, ಮಂತ್ರಿಗಳು, ಅಧ್ಯಕ್ಷರು ಹೀಗೆ ಮುಖ್ಯ ಮಂತ್ರಿಗಳಾದರೂ ಅಷ್ಟೆ. ಹತ್ತು ತಿಂಗಳಾದರೂ ಇಪ್ಪತ್ತು ತಿಂಗಳಾದರೂ ಅಷ್ಟೆ. ಪತ್ರಕರ್ತರಿಗೂ "ಸಾಧನೆಯ ರಾಜ್ಯೋತ್ಸವ ಪ್ರಶಸ್ತಿ" ಕೊಟ್ಟಿದ್ದಾರೆ. ಅವರಿಗೂ ಜೀವನದ ಉದ್ದಕ್ಕೂ ಪ್ರಶಸ್ತಿ ಕಿರೀಟ ಜೊತೆಯಲ್ಲಿಯೇ ಇರುತ್ತೆ. ಇರಲಿ ಬಿಡಿ ಏನು ಮಾಡಕಾಗುತ್ತೆ. "ಎನೇ ಆಗಲಿ ನನ್ನ ಕಡೆಯಿಂದ ಸನ್ಯಾನ್ಯಶ್ರೀ ಪ್ರತಾಪಸಿಂಹರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಕ್ಕೆ ಶುಭಾಶಯಗಳು"
ನಮ್ಮ ಕರ್ನಾಟಕ ರಾಜ್ಯ, ನಮ್ಮ ಭಾಷೆ, ದೇವರೇ ಕಾಪಾಡಬೇಕು.
ದೊಡ್ಡವರು, ಅನುಭವಿ ಪತ್ರಕರ್ತರು, ಅವರುಗಳಿಗೆ ನಾನು ಸಾಮಾನ್ಯ ವ್ಯಕ್ತಿ ಹೇಳಕ್ಕೆ ಆಗುತ್ತದೆಯೇ?
ಅವರ ಮನಸ್ಸಿಗೆ ಅನ್ನಿಸಿದ್ದನ್ನು ಅವರು ಮಾಡೇ ಮಾಡ್ತಾರೆ.
ಅವರ ಲೆಖನಕ್ಕೆ ಶುಭಾಶಯ ಸಲ್ಲಿಸುವವರು "ಇಂಗ್ಲೀಷ್ ' ನಲ್ಲಿಯೇ ಬರೆಯುತ್ತಾರೆ. ಆಡಿಸುವಾತನೇ ಇಂಗ್ಲೀಷ್ ವ್ಯಾಮೋಹಕ್ಕೆ ಬಿದ್ದರೆ,
ಆಡುವವರು ನಾವು ಕನ್ನಡ ಪ್ರೇಮ ಬರುತ್ತದೆಯೇ ಖಂಡಿತ ಸಾಧ್ಯವಿಲ್ಲ. ಕೋಣ ಈದೈತೆ ಅಂದರೆ ಕೊಟ್ಟಿಗೆ ಕಟ್ಟು ಅಂದ ಹಾಗೆ ದೊಡ್ಡ ಮನುಷ್ಯರು ಏನೇ ಬರೆದರೂ "
HEARTY CONGRANTS................
congrates sir
Congratulations Sir,
Many Conratulations sir we wish u many more sucess in ur life.................
Shubhashayagalu sir...
Sir nimma khushiyannu kannadalli tilisiddare namage innu santhosha aagtittu...
ಇವುಗಳನ್ನು ಮುಂದುವರೆಸುತ್ತಾರೆ.
ಕೊನೆಯದಾಗಿ ನಾನು ಜೈ ಅಂದುಬಿಡುತ್ತೇನೆ.
"JAI BHUVANESHWARI"
" SIRI GANNADAM GELGE"
"SIRI GANNADAM BAALGE"
ರಾಜು ವಿನಯ್ ದಾವಣಗೆರೆ